ಹಂಸಲೇಖ ಶಿಷ್ಯಂದಿರ ಚಿತ್ರ “ತೂತ್ ಕಾಸು” ಇದೇ 22ರಂದು ಬಿಡುಗಡೆ
ಚಂದನವನಕ್ಕೆ ಯುವ ಪ್ರತಿಭೆಗಳ ದಂಡು ಸಾಲುಸಲಾಗಿ ಬರುತ್ತಿದ್ದು , ಬಹಳಷ್ಟು ಕನಸುಗಳನ್ನು ಹೊತ್ತುಕೊಂಡು ಬಣ್ಣದ ಪ್ರಪಂಚದಲ್ಲಿ ನೆಲೆಯೂರಲು ಮುಂದಾಗಿದ್ದು , ಆ ನಿಟ್ಟಿನಲ್ಲಿ ಹಂಸಲೇಖರವರ ದೇಸಿ ಶಾಲೆಯಲ್ಲಿ ತರಬೇತಿ ಪಡೆದಂತ ವಿದ್ಯಾರ್ಥಿಗಳು ಹೊರಬಂದು ಸ್ವತಂತ್ರವಾಗಿ ಗೆಳೆಯರೆಲ್ಲ ಒಗ್ಗೂಡಿಕೊಂಡು ‘ತೂತ್ ಕಾಸು’ ಎಂಬ ಚಿತ್ರವನ್ನು ಸಿದ್ಧಪಡಸಿ ತೆರೆಗೆ ತರಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೇ ಚಿತ್ರತಂಡ ಹಾಡು ಮತ್ತು ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಪತ್ರಿಕಾಗೋಷ್ಠಿಯನ್ನು ಯೋಜನೆಯ ಮಾಡಿತ್ತು.
ಈ ಚಿತ್ರದ ನಿರ್ದೇಶಕ ರವಿ ತೇಜಸ್ ಮಾತನಾಡುತ್ತಾ ಇದು ನನ್ನ ಮೊದಲ ಚಿತ್ರ , ನಾನು ದೇಸಿ ಶಾಲೆಯ ಪ್ರತಿಭೆ. ಈ ‘ತೂತ್ ಕಾಸು’ 1942 ರಿಂದ 1947ರವರೆಗೆ ಚಲಾವಣೆಯಲ್ಲಿದ್ದ ನಾಣ್ಯ. ಸ್ವಾತಂತ್ರ್ಯ ನಂತರ ತೂತ್ ಕಾಸಿನ ಚಲಾವಣೆಯನ್ನು ಸರ್ಕಾರದಿಂದ ನಿಲ್ಲಿಸಲಾಯಿತು. ಆದರೆ ಈ ಶೀರ್ಷಿಕೆ ಚಲಾವಣೆ ವಿಷಯಕ್ಕೆ ಸಂಬಂಧಿಸಿದಲ್ಲ , ನಾವು ಸಿನಿಮಾದಲ್ಲಿ ಇದೊಂದು ಕೋಡ್ ವರ್ಡ್ ಆಗಿ ಬಳಸಲಾಗಿದೆ.
ನಮ್ಮ ಚಿತ್ರ ಮಾಫಿಯಾ ಗ್ಯಾಂಗ್ ಸುತ್ತ ಸಾಗುತ್ತದೆ. ಬಹಳಷ್ಟು ಹೋಮರ್ಕ್ ಮಾಡಿ ಈ ಚಿತ್ರವನ್ನ ಸಿದ್ಧಪಡಿಸುತ್ತಿದ್ದೇನೆ. ಬಹುತೇಕ ಹೊಸಬರೇ ಅಭಿನಯಿಸಿರುವ ಈ ಚಿತ್ರವನ್ನು ತುಮಕೂರು , ಉಡುಪಿ ಸೇರಿದಂತೆ ಹಲವಡೆ ಚಿತ್ರೀಕರಣ ಮಾಡಿದ್ದೇವೆ. ಇದೇ 22ರಂದು ರಾಜ್ಯದ್ಯಂತ ಬಿಡುಗಡೆ ಮಾಡುತ್ತಿದ್ದು, ನಿಮ್ಮೆಲ್ಲರ ಪ್ರೀತಿ ಸಹಕಾರ ಇರಲಿ ಎಂದು ಕೇಳಿಕೊಂಡರು.
ಇನ್ನು ನಾಯಕ ವರುಣ್. ಬಿ.ದೇವಯ್ಯ ಮಾತನಾಡಿ, ಸುಮಾರು 10 ವರ್ಷದ ಗ್ಯಾಪ್ ನ ನಂತರ ಮಾಡಿರುವ ಸಿನಿಮಾ ಇದು. ನಾವೆಲ್ಲ ಚಿತ್ರಕ್ಕಾಗಿ ತುಂಬಾ ಎಫರ್ಟ್ ಹಾಕಿದ್ದೇವೆ. ಸಸ್ಪೆನ್ಸ್ , ಥ್ರಿಲ್ಲಿಂಗ್ ಎಲಿಮೆಂಟ್ಸ್ ತುಂಬಾ ಇದೆ. ಸಿನಿಮಾ ನೋಡಿ ಸಪೋರ್ಟ್ ಮಾಡಿ ಎಂದರು. ಈ ಚಿತ್ರದಲ್ಲಿ ವಿನೋದ್ ಆನಂದ್ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡು ಜೊತೆಗೆ ಕಂಟೆಂಟ್ ಕ್ರಿಯೇಟ್ ಆಗಿಯೂ ಕೂಡ ಕೆಲಸ ಮಾಡಿದ್ದಾರೆ.
ಇನ್ನು ಈ ಚಿತ್ರದ ನಾಯಕಿಯಾಗಿ ಉತ್ತರ ಕರ್ನಾಟಕದ ಪ್ರತಿಭೆ ತ್ರಿಷಾ ಅಭಿನಯಿಸಿದ್ದಾರೆ. ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ತ್ರಿಷಾ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ತವಕದೊಂದಿಗೆ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮತ್ತೊಬ್ಬ ನಟಿಯಾಗಿ ಪ್ರೇರಣಾ ಭಟ್, ರಾಕೇಶ್ ಸೇರಿದಂತೆ ಹಲವಾರು ಪ್ರತಿಭೆಗಳು ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ಲೋಕಿ ತವಸ್ಯ ಸಂಗೀತ ನೀಡಿದು, ಮೂರು ಹಾಡುಗಳನ್ನು ಒಳಗೊಂಡಿದೆ. ಮಹೇಶ್. ಕೆ .ಭರದ್ವಾಜ್ ಹಿನ್ನೆಲೆ ಸಂಗೀತ ನೀಡಿದ್ದು ಗಣೇಶ್ ಕೆಳಮನೆ ಛಾಯಾಗ್ರಹಣ ಮಾಡಿದ್ದಾರೆ.ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ ಮೂಲಕ ಜಗದೀಶ್ ರವರು ರಾಜ್ಯಾದ್ಯಂತ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಕಾಮಿಡಿ ಜಾನರ್ ಕಥಾ ಹಂದರ ಹೊಂದಿರುವ ಈ ‘ತೂತ್ ಕಾಸು’ ಚಿತ್ರದ ಟೈಲರ್ ಬಹಳಷ್ಟು ಗಮನ ಸೆಳೆದಿದ್ದು , ಚಿತ್ರ ಯಾವ ರೀತಿ ಪ್ರೇಕ್ಷಕರನ್ನ ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.