Cini NewsSandalwoodTV SerialUncategorized

ಅಯ್ಯನ ಮನೆಯ ‘ಖುಷಿ’ಯ ಮನದ ಮಾತು.

“ಜೀ 5 ಓಟಿಟಿ ಯಲ್ಲಿ “ಅಯ್ಯನ ಮನೆ” ವೆಬ್ ಸಿರೀಸ್ ಮೂಲಕ ದಿಯಾ ಖ್ಯಾತಿಯ ನಟಿ ಖುಷಿ ರವಿ ಕಿರುಪರದೆಯ ಮೇಲೆ ಬರುತ್ತಿದ್ದಾರೆ.”

ಸ್ಯಾಂಡಲ್ ವುಡ್ ನ ಬಹುಮುಖ ಪ್ರತಿಭೆ , ಮುದ್ದಾದ ಬೆಡಗಿ ದಿಯಾ ಖ್ಯಾತಿಯ ನಟಿ ಖುಷಿ ರವಿ. ಮೂಲತಃ ಮದ್ದೂರಿನ ಸುಶ್ಮಿತಾ , ದಿಯಾ ಚಿತ್ರದಿಂದ ಖುಷಿ ರವಿಯಾಗಿ ಚಿತ್ರರಂಗಕ್ಕೆ ಪರಿಚಯ. ಬಿಕಾಂ ಪದವಿದರೆಯಾದ ಖುಷಿಗೆ ನಟನೆಯ ಬಗ್ಗೆ ಅಪಾರ ಆಸಕ್ತಿ. ಇಂದು ಈ ವೃತ್ತಿಯೇ ಅವರ ಬದುಕಿಗೆ ಒಂದು ಯಶಸ್ಸಿನ ಆದಿಯನ್ನ ತೋರುತ್ತಿದ್ದು , 8 ವರ್ಷದ ನಿರಂತರ ಪ್ರಯತ್ನದ ಫಲವಾಗಿ ದಿಯಾ ಚಿತ್ರದ ನಂತರ ಕನ್ನಡ , ತಮಿಳು , ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಅವಕಾಶ ಬರುತ್ತಿದ್ದು , ಸೂಕ್ತ ಕಥೆಯ ಆಯ್ಕೆ ಮಾಡಿ ಮುಂದೆ ಹೆಜ್ಜೆ ಇಡುತ್ತಿದ್ದೇನೆ ಎನ್ನುತ್ತಾರೆ.


2025 ನನಗೆ ಬಹಳ ಲಕ್ಕಿ ವರ್ಷ “ಸಿನಿಮಾ , ವೆಬ್ ಸಿರೀಸ್” ಬರುತ್ತಿದೆ.

ಈಗಾಗಲೇ ಆರು ಚಿತ್ರಗಳ ಚಿತ್ರೀಕರಣ ಮುಗಿದಿದ್ದು , ನನ್ನ ಐದು ಚಿತ್ರಗಳು ಬಿಡುಗಡೆ ಆಗಬೇಕಿದೆ. ಅದರಲ್ಲೂ ಫುಲ್ ಮೀಲ್ಸ್ , ಸನ್ ಆಫ್ ಮುತ್ತಣ್ಣ , ನಾಕುತಂತಿ , ವನ್ ವೇ ಚಿತ್ರಗಳು ಬಹಳ ವಿಭಿನ್ನವಾಗಿ ಮೂಡಿ ಬಂದಿದೆ. ತೆಲುಗಿನಲ್ಲಿ ಎರಡು ಚಿತ್ರ , ತಮಿಳಿನಲ್ಲಿ ಆಲ್ಬಮ್ ಸಾಂಗ್ ಹಾಗೂ ಚಿತ್ರಗಳು ಮಾಡಿದ್ದೇನೆ. ಅದರಲ್ಲೂ ವಿಶೇಷವಾಗಿ “ರುದ್ರ” ಎನ್ನುವ ತೆಲುಗು ಚಿತ್ರದಲ್ಲಿ ಟ್ರಾನ್ಸ್ಜೆಂಡರ್ (ಮಂಗಳ ಮುಖಿ)ಯ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳುವ ಪಾತ್ರ ಮಾಡಿದ್ದೇನೆ. ಅದು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಒಬ್ಬ ಕಲಾವಿದರಾಗಿ ಎಲ್ಲಾ ರೀತಿಯ ಪಾತ್ರವನ್ನು ಮಾಡಲು ಸಿದ್ಧರಾಗಿರಬೇಕು , ನಾನು ಕಮರ್ಷಿಯಲ್ ಹಾಗೂ ಟ್ರೆಡಿಷನ್ ಪಾತ್ರಗಳಲ್ಲಿ ಅಭಿನಯಿಸುವುದಕ್ಕೆ ಸಿದ್ದ. ಆಕ್ಷನ್ ಚಿತ್ರಗಳು ನನಗೆ ಹೆಚ್ಚು ಇಷ್ಟ. ಬಿಗ್ ಸ್ಕ್ರೀನ್ ಅಥವಾ ಸ್ಮಾಲ್ ಸ್ಕ್ರೀನ್ ನಲ್ಲಿ ಒಳ್ಳೆಯ ಅವಕಾಶ , ಉತ್ತಮ ಪಾತ್ರ ಸಿಕ್ಕರೆ ಖಂಡಿತ ಜನರ ಮನಸ್ಸನ್ನು ಗೆಲ್ಲುತ್ತೇನೆ. ನನ್ನ ಈ ಸಿನಿ ಜರ್ನಿಗೆ ನನ್ನ ಕುಟುಂಬ ನನಗೆ ಬೆಂಬಲವಾಗಿ ನಿಂತಿದೆ ಎಂದರು.

“ಅಯ್ಯನ ಮನೆ” ವೆಬ್ ಸಿರೀಸ್.

ಅಯ್ಯನ ಸೊಸೆಯಾಗಿ ನಿಮ್ಮ ಮನಸ್ಸನ್ನು ಗೆಲ್ಲುತ್ತೇನೆ. ಬಹಳ ಕುತೂಹಲಕಾರಿಯಾಗಿ ಸಾಗುವ ಎಪಿಸೋಡ್ಸ್ ಗಳು ನಮ್ಮ ವೆಬ್ ಸೀರೀಸ್ ನಲ್ಲಿ ಸಿಗಲಿದೆ. ಜಾಜಿ ಎಂಬ ಸಂಪ್ರದಾಯದ ಮನೆಯ ಮಗಳಾಗಿ ಕಾಣಿಸಿಕೊಂಡಿದ್ದೇನೆ. ಅಯ್ಯನ ಮನೆಯ ಮೂರನೇ ಸೊಸೆಯಾಗಿ ಬರುವ ನಾನು ಅಲ್ಲಿನ ವ್ಯವಸ್ಥೆ , ಪದ್ಧತಿ ಆಚಾರ-ವಿಚಾರಗಳ ನಡುವೆ ನಡೆಯುವ ಒಂದಷ್ಟು ಘಟನೆಗಳು ನನ್ನ ಸುತ್ತ ಬೆಸೆದುಕೊಂಡು ಸಾಗುವಂತಿದೆ. ಇದೇ ಮೊದಲ ಬಾರಿಗೆ ವೆಬ್ ಸೀರೀಸ್ ಒಂದರಲ್ಲಿ ಅಭಿನಯಿಸುತ್ತಿದ್ದೇನೆ. 25 ದಿನಗಳ ಕಾಲ ಚಿಕ್ಕಮಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ನಮ್ಮ ವೆಬ್ ಸೀರೀಸ್ ನ 7ಕಂತು ಗಳು ಪ್ರಸಾರವಾಗಲು ಸಿದ್ಧವಾಗಿದ್ದು , ಪ್ರಮೋಷನ್ ಕೆಲಸವು ಆರಂಭಗೊಂಡಿದೆ.


ಈಗ ಓಟಿಟಿಗಳಲ್ಲಿ ವೆಬ್ ಸೀರೀಸ್ ಟ್ರೆಂಡಿಂಗ್ ಜೋರಾಗಿ ನಡೆಯುತ್ತಿದ್ದು , ಜೀ 5 ಓಟಿಟಿಯಲ್ಲಿ ಕನ್ನಡದ ಏಳು ಎಪಿಸೋಡ್ ಗಳನ್ನ ಒಳಗೊಂಡಿರುವ “ಅಯ್ಯನ ಮನೆ” ಯ ಮಿನ್ನಿ ವೆಬ್ ಸೀರೀಸ್ ಏಪ್ರಿಲ್ 25ರಿಂದ ವೀಕ್ಷಕರಿಗೆ ಸಿಗಲಿದೆ. ನಟ , ನಿರ್ದೇಶಕ , ರಮೇಶ್ ಇಂದಿರಾ ಈ ವೆಬ್ ಸರಣಿಯನ್ನು ನಿರ್ದೇಶನ ಮಾಡಿದ್ದು , ನಾನು ಬಹಳಷ್ಟು ಅವರಿಂದ ಕಲಿತಿದ್ದೇನೆ. ಬಹಳಷ್ಟು ಕಲಾವಿದರು ಈ ನಮ್ಮ ವೆಬ್ ಸೀರೀಸ್ ನಲ್ಲಿ ಅಭಿನಯಿಸಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹ , ಸಹಕಾರ ನನ್ನ ಮೇಲೆ ಹಾಗೂ ನಮ್ಮ ವೆಬ್ ಸೀರೀಸ್ ಮೇಲೆ ಇರಲಿ ಎಂದು ಕೇಳಿಕೊಂಡರು.

error: Content is protected !!