ʼಎಲ್ಟು ಮುತ್ತಾʼ ಚಿತ್ರ ಬಿಡುಗಡೆಗೆ ರೆಡಿ.
ಹೈ5 ಸ್ಟುಡಿಯೋಸ್ ನಿರ್ಮಾಣದ ಚೊಚ್ಚಲ ಸಿನಿಮಾ ಎಲ್ಟು ಮುತ್ತಾ ಟೈಟಲ್ ನಿಂದಲೇ ನಿರೀಕ್ಷೆ ಹೆಚ್ಚಿಸಿದೆ. ಪೋಸ್ಟರ್ ಮೂಲಕ ಗಮನಸೆಳೆದಿದ್ದ ಚಿತ್ರತಂಡ ಇತ್ತೀಚೆಗಷ್ಟೇ ಮಾಧ್ಯಮದರ ಮುಂದೆ ಬಂದಿದ್ದರು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಎಲ್ಟಾ ಮುತ್ತಾ ಚಿತ್ರತಂಡದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು, ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿಯಾಗಿರುವ ಚಿತ್ರದ ಬಗ್ಗೆ ನಿರ್ದೇಶಕರು, ನಿರ್ಮಾಪಕ ಹಾಗೂ ಇಡೀ ತಂಡ ಮಾಹಿತಿ ಹಂಚಿಕೊಂಡಿದೆ.
ನಿರ್ಮಾಪಕ ಸತ್ಯ ಶ್ರೀನಿವಾಸನ್ ಮಾತನಾಡಿ, ಹೈ5 ಸ್ಟುಡಿಯೋವನ್ನು ಎರಡು ಉದ್ದೇಶದಿಂದ ಶುರು ಮಾಡಿದ್ದೇವು. ಒಳ್ಳೆ ಸಿನಿಮಾ ಮಾಡಬೇಕು. ಹಾಗೂ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸಬೇಕು ಎಂದು ಸ್ಟುಡಿಯೋಸ್ ಪ್ರಾರಂಭಿಸಿದ್ದೇವು. ಮೊದಲು ಎಲ್ಟು ಮುತ್ತಾ ಎಂಬ ಚಿತ್ರ ಮಾಡಿದ್ದೇವೆ. ಈ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, ರಿಲೀಸ್ ಗೆ ರೆಡಿ ಇದ್ದೇವೆ. 50 ದಿನ ಕೊಡಗು ಹಾಗೂ 2 ದಿನ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು. ನಿರ್ದೇಶಕರಾದ ರಾ ಸೂರ್ಯ ಮಾತನಾಡಿ, ಎಲ್ಟು ಮುತ್ತಾ ಎರಡು ಪಾತ್ರಗಳ ಸುತ್ತ ನಡೆಯುವ ಕಥೆ ಇದಾಗಿದ್ದು, ಟೆಕ್ನಿಷನ್ ಆಗಬೇಕು ಎಂದು ಬಂದವರು ಈ ಚಿತ್ರದಲ್ಲಿ ನಟಿಸಿದ್ದೇವೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
ನಾಯಕ ಶೌರ್ಯ ಪ್ರತಾಪ್ ಮಾತನಾಡಿ, ನಮ್ಮದು ಹೊಸತಂಡ. ಜನ ದುಡ್ಡು ಕೊಟ್ಟು ನಮ್ಮ ಚಿತ್ರವನ್ನು ಏಕೆ ನೋಡಬೇಕು? ಎಂದು ನಾವೇ ಪ್ರಶ್ನೆಗಳನ್ನು ಹಾಕಿಕೊಂಡಿದ್ದೇವೆ. ನಮ್ಮನ್ನು ನೋಡಿ ಜನ ಥಿಯೇಟರ್ ಗೆ ಬರುವುದು ಬೇಡ . ಚಿತ್ರದ ಕಂಟೆಂಟ್ ನೋಡಿ ಬರಲಿ. ಒಂದೊಳ್ಳೆ ತಂಡ ಸೇರಿ ಎಲ್ಟಾ ಮುತ್ತಾ ಚಿತ್ರ ಮಾಡಿದ್ದೇವೆ ಎಂದರು. ಹೊಸಬರೇ ಸೇರಿಕೊಂಡು ಎಲ್ಟಾ ಮುತ್ತಾ ಸಿನಿಮಾವನ್ನು ಮಾಡಿದ್ದಾರೆ. ರಾ ಸೂರ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕರಾಗಿ ಇದು ಇವರ ಮೊದಲ ಪ್ರಯತ್ನ. ಯುವ ನಟ ಶೌರ್ಯ ಪ್ರತಾಪ್ ನಾಯಕನಾಗಿ ಬಣ್ಣ ಹಚ್ಚಿದ್ದು, ನಾಯಕಿಯಾಗಿ ಪ್ರಿಯಾಂಕಾ ಮಾಲಲಿ ಸಾಥ್ ಕೊಟ್ಟಿದ್ದಾರೆ. ಕಾಕ್ರೋಚ್ ಸುಧಿ, ಯಮುನಾ ಶ್ರೀನಿಧಿ, ನವೀನ್ ಪಡಿಲ್ ಇತರರು ತಾರಾಬಳಗದಲ್ಲಿದ್ದಾರೆ.
ನೈಜ ಘಟನೆಯಾಧಾರಿತ ‘ಎಲ್ಟು ಮುತ್ತಾ’ ಸಿನಿಮಾಗೆ ಸತ್ಯ ಶ್ರೀನಿವಾಸನ್, ನಿರ್ದೇಶಕ ರಾ ಸೂರ್ಯ, ನಾಯಕ ಶೌರ್ಯ ಪ್ರತಾಪ್, ಪ್ರಸನ್ನ ಕೇಶವ, ರುಹಾನ್ ಆರ್ಯ ನಿರ್ಮಾಣ ಮಾಡಿದ್ದಾರೆ. ಎಲ್ಟೂ ಮುತ್ತಾ ಎರಡು ಪಾತ್ರಗಳ ಹೆಸರಾಗಿವೆ. ಚಿತ್ರದಲ್ಲಿ ಶೌರ್ಯ ಪ್ರತಾಪ್ ನಾಯಕನಾಗಿ ಬಣ್ಣ ಹಚ್ಚುವುದರ ಜೊತೆಗೆ ಸಹ ನಿರ್ದೇಶಕರಾಗಿ ಹಾಗೂ ಸಹ ಬರಗಾರರನಾಗಿ ಸೂರ್ಯ ಅವರಿಗೆ ಜೊತೆಯಾಗಿ ನಿಂತಿದ್ದಾರೆ. ಪ್ರಸನ್ನ ಕೇಶವ ಸಂಗೀತ, ಮೆಯ್ಯಪ್ಪ ಭಾಸ್ಕರ್ ಛಾಯಾಗ್ರಹಣ, ಕೆ.ಯೇಸು ಸಂಕಲನ, ಜ್ಞಾತಿ ರಾಹುಲ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಅಜಿತ್ ಕೇಶವ, ರಾ ಸೂರ್ಯ ಹಾಗೂ ಶೌರ್ಯ ಪ್ರತಾಪ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.