ಸೆನ್ಸರ್ ನಿಂದ ಯು/ಎ ಸರ್ಟಿಫಿಕೆಟ್ ಪಡೆದ “ಯುವಕರು”.
ರುದ್ರಾಕ್ಷಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಾ.ಸುಕನ್ಯ ಹಿರೇಮಠ್ ಮತ್ತು ಪವಿತ್ರ ಹಿರೇಮಠ್ ನಿರ್ಮಿಸಿರುವ “ಯುವಕ” ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ. ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಡಾ.ಬಿ.ಆರ್. ಹಿರೇಮಠ್ ರವರ ಮೂಲ ಪರಿಕಲ್ಪನೆಯನ್ನು ಕಥೆಯಾಗಿಸಿ ಚಿತ್ರಕಥೆ-ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನವನ್ನು ಡಾ||ಗುಣವಂತ ಮಂಜೂರ್ ನಿರ್ವಹಿಸಿದ್ದಾರೆ.
6 ಹಾಡುಗಳುಳ್ಳ ಈ ಚಿತ್ರವು ಬೆಂಗಳೂರು, ದೇವನಹಳ್ಳಿ, ತಲಕಾಡು, ಮುಂತಾದೆಡೆಗಳಲ್ಲಿ ನಡೆದಿದೆ. ಶ್ರೀ.ಚೇತನ್, ಪವಿತ್ರಾ, ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. ಮಾದಕ ವಸ್ತುಗಳ ವ್ಯಸನದಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು ಮತ್ತು ಯುವಜನತೆ ಇದರಿಂದ ದಾರಿ ತಪ್ಪುತ್ತಿರುವ ಬಗ್ಗೆ ವಿವರಿಸಲಾಗಿದೆ.
ಈ ಚಟಕ್ಕೆ ಬಿದ್ದಾಗ ದೇಶಕ್ಕೂ ಹಾನಿ, ದೇಹಕ್ಕೂ ಹಾನಿ ಉಂಟಾಗುವುದೆಂಬ ಸಂದೇಶವನ್ನು ನೀಡುವ ಕಥೆಯನ್ನು ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ರಂಗಭೂಮಿ ಮತ್ತು ಹೊಸ ಕಲಾವಿದರುಗಳು 50ಕ್ಕೂ ಹೆಚ್ಚು ಜನ ಪಾತ್ರವಹಿಸಿದ್ದಾರೆ.
ಈ ಚಿತ್ರಕ್ಕೆ ಬಿ.ಬಲರಾಂ -ಸಂಗೀತ, ಬಸಯ್ಯ ಹಿರೇಮಠ್-ಛಾಯಾಗ್ರಹಣ, ಹೆಚ್.ಸಿ. ಕುಮಾರ್-ಸಂಕಲನ, ತಾರಾಗಣದಲ್ಲಿ ಶ್ರೀಚೇತನ್, ಪವಿತ್ರಾ ಹಿರೇಮಠ್, ರೋಹಿಣಿ, ಸಿ.ಸೋಮಶೇಖರ್, ಗುಣವಂತ ಮಂಜು, ಚನ್ನಕೇಶವ, ಸಮರ್ಥ, ಶಿವಕುಮಾರ್ ನಾಗರನವಿಲೆ, ಪ್ರದೀಪ್ ಪುಟ್ಟ, ಪುಷ್ಪಲತಾ, ಮಹೇಶ್ ಸಾಗರ, ಬಲಾಮ್, ರುದ್ರಮುನಿ ಮುಂತಾದವರು ಅಭಿನಯಿಸಿದ್ದಾರೆ.