ಬ್ಯಾಂಕ್ ಟ್ರಾನ್ಸಾಕ್ಷನ್ ಎಡವಟ್ಟುಗಳ ರೋಚಕತೆ…ಜೀಬ್ರಾ ಚಿತ್ರವಿಮರ್ಶೆ (ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : ಜೀಬ್ರಾ
ನಿರ್ದೇಶಕ : ಈಶ್ವರ್ ಕಾರ್ತಿಕ್
ನಿರ್ಮಾಪಕರು : ಬಾಲ ಸುಂದರಂ , ಎಸ್.ಎನ್.ರೆಡ್ಡಿ
ಸಂಗೀತ : ರವಿ ಬಸ್ರೂರು
ಛಾಯಾಗ್ರಹಣ : ಸತ್ಯ
ತಾರಾಗಣ : ಧನಂಜಯ , ಸತ್ಯದೇವ , ಪ್ರಿಯಾ ಭವಾನಿ, ಅಮೃತಾ ಅಯ್ಯಂಗಾರ್ , ಜೆನಿಫರ್, ಸುನಿಲ್, ಸತ್ಯ ಸತ್ಯರಾಜ್ ಸುರೇಶ್ ಚಂದ್ರ ಹಾಗೂ ಮುಂತಾದವರು…
ಪ್ರತಿಯೊಬ್ಬರ ಬದುಕಿಗೂ ಹಣ ಬಹಳ ಮುಖ್ಯ. ಅದನ್ನು ಸೇಫ್ ಗಾರ್ಡ್ರ್ಡ್ ಮಾಡಿ ಸಮಯ ಸಂದರ್ಭಕ್ಕೆ ಬಳಸಿಕೊಳ್ಳಲು ಆಯ್ಕೆ ಮಾಡುವ ಸೂಕ್ತ ಸ್ಥಳ ಬ್ಯಾಂಕ್. ಆದರೆ ಅಂತಹದ್ದೇ ಒಂದು ಬ್ಯಾಂಕಿನಲ್ಲಿ ಟ್ರಾನ್ಸಾಕ್ಷನ್ ವಿಚಾರದಲ್ಲಿ ಆಗುವ ಸಣ್ಣ ಎಡವಟ್ಟು ಒಂದಷ್ಟು ಗೊಂದಲಕ್ಕೆ ದಾರಿಯಾಗಿ ದೊಡ್ಡಮಟ್ಟದ ಸ್ಕ್ಯಾಮ್ ಗೆ ನಾಂದಿ ಆಗುವಂತಹ ಕಥಾನಕ ಮೂಲಕ ಈ ವಾರ ತೆರೆಯ ಮೇಲೆ ಬಂದಿರುವಂತಹ ಡಬ್ಬಿಂಗ್ ಚಿತ್ರ “ಜೀಬ್ರಾ”. ಬ್ಯಾಂಕ್ ಆಫ್ ಟ್ರಸ್ಟ್ ನಲ್ಲಿ ಕೆಲಸ ಮಾಡುವ ಸೂರ್ಯ (ಸತ್ಯದೇವ್) ತನ್ನ ತಾಯಿ ಆಸೆಯಂತೆ ಒಂದು ಫ್ಲಾಟ್ ಪಡೆಯಲು ನಿರ್ಧರಿಸುತ್ತಾನೆ.
ಹಾಗೆ ತನ್ನ ಪ್ರೇಯಸಿ ಸ್ವಾತಿ(ಪ್ರಿಯಾ) ಕೂಡ ಬ್ಯಾಂಕ್ ಉದ್ಯೋಗಿಯಾಗಿದ್ದು , ಸೂರ್ಯನ ಕನಸಿಗೆ ಸಾತ್ ನೀಡುತ್ತಾಳೆ. ಸ್ವಾತಿ ತನ್ನ ಕೆಲಸದಲ್ಲಿ ಎಡವಟ್ಟು ಮಾಡಿಕೊಂಡು ಬ್ಯಾಂಕ್ ಟ್ರಾನ್ಸ್ಲೇಷನ್ ನಲ್ಲಿ ಬೇರೆಯವರ ಅಕೌಂಟ್ಗೆ ಹಣ ವರ್ಗಾವಣೆ ಮಾಡಿ ಇಕ್ಕಟ್ಟಿಗೆ ಸಿಲ್ಕುತ್ತಾಳೆ. ಅದನ್ನು ಸರಿಪಡಿಸಲು ಬರುವ ಸೂರ್ಯ ಬ್ಯಾಂಕಿನ ಆಗುಹೋಗುಗಳು , ಟೆಕ್ನಿಕಲ್ ಫಾರ್ಮೆಟ್ ಮೂಲಕ ಹಣವನ್ನು ಹಿಂಪಡೆಯಲು ಮುಂದಾಗುತ್ತಾನೆ.
ಇದು ಮುಂದೆ ದೊಡ್ಡ ಜಾಲಕ್ಕೆ ಸಿಲುಕುವಂತೆ ಮಾಡುತ್ತದೆ. ದೇಶ ವಿದೇಶದ ಬ್ಲಾಕ್ ಅಂಡ್ ವೈಟ್ ಅಮೌಂಟ್ ಗಳ ದಂದೆಯ ರೂವಾರಿಗಳ ಸಂಗಮವಾಗುತಿದ್ದಂತೆ. ಡಿ ಅಕ್ಷರದ devil ಟ್ಯಾಟೋ ದೇವರಾಜ್ (ಡಾಲಿ ಧನಂಜಯ) ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡು ದೊಡ್ಡ ಮಟ್ಟದ ಗುರಿಯೊಂದಿಗೆ ಮುಂದಾಗುತ್ತಾನೆ.
ಮತ್ತೊಂದು ಗ್ಯಾಂಗ್ ಗುಪ್ತ (ಸುನಿಲ್) ತನ್ನ ಬಾಸ್ (ಕೆ.ಜಿ. ಎಫ್. ವಿಲನ್ ರಾಮಚಂದ್ರ) ಅಣತಿಯಂತೆ ಕೆಲಸ ಮಾಡುತ್ತಾನೆ. ಈ ಎರಡು ಗ್ಯಾಂಗಿನ ಗೇಮ್ ಪ್ಲಾನ್ ಗೆ ದೊಡ್ಡ ತಿರುವು ಎದುರಾಗುವುದೇ ಹಣದ ವಹಿವಾಟು. ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಬ್ಯಾಂಕಿಂಗ್ ವ್ಯವಹಾರದ ಸೂಕ್ಷ್ಮತೆಯ ಜೊತೆ ಆಗುವ ಎಡವಟ್ಟುಗಳ ಸುತ್ತ ನಡೆಯುವ ಈ ಕಥಾನಕ ಕುತೂಹಲ ಹಾಗೂ ರೋಚಕ ಹಂತಕ್ಕೆ ಬಂದು ನಿಲ್ಲುತ್ತದೆ. ಅದು ಹೇಗೆ… ಏನು… ಎಂಬುದನ್ನು ನೋಡಬೇಕಾದರೆ ಖಂಡಿತ ಈ ಚಿತ್ರವನ್ನು ನೀವು ನೋಡಲೇಬೇಕು.
ಈ ರೀತಿಯಾದಂತಹ ಕಥೆಯನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಈಶ್ವರ್ ಕಾರ್ತಿಕ್ ಬುದ್ಧಿವಂತಿಕೆಯನ್ನು ಮೆಚ್ಚಲೇಬೇಕು. ಅವರು ಒಬ್ಬ ಬ್ಯಾಂಕ್ ಎಂಪ್ಲಾಯ್ ಆಗಿದ್ದೆ ಇದಕ್ಕೆ ಕಾರಣ ಎನ್ನಬಹುದು. ಬ್ಯಾಂಕಿಂಗ್ ಕ್ಷೇತ್ರದ ಆಗುಹೋಗುಗಳನ್ನ ಬಹಳ ಕೂಲಂಕುಷವಾಗಿ ಚಿತ್ರ ರೂಪಕ್ಕೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ. ರಾಜಕೀಯ , ಬಿಸಿನೆಸ್ ಮ್ಯಾನ್ ಗಳ ಗೇಮ್ ಪ್ಲಾನ್ , ಹಣದ ವಹಿವಾಟು , ಶೇರು ಮಾರುಕಟ್ಟೆ ಹೀಗೆ ಸಮಾಜದ ವ್ಯವಸ್ಥೆ , ಕುಂದು ಕೊರತೆಗಳನ್ನೇ ಬಂಡವಾಳ ಮಾಡಿಕೊಂಡು ಹೇಗೆ ಕೋಟಿ ಕೋಟಿ ವಂಚನೆ ಮಾಡಬಹುದು ಎಂಬುದನ್ನ ಸೂಕ್ಷ್ಮವಾಗಿ ತೆರೆಯ ಮೇಲೆ ತೆರೆದಿಟ್ಟಿದ್ದಾರೆ. ಆದರೆ ಸ್ಟಾರ್ ನಟರುಗಳ ಚಿತ್ರದಲ್ಲಿ ಇರಬೇಕಾದ ಅಂಶಗಳು ಕಮ್ಮಿ ಆದಂತೆ ಇದೆ. ಆದರೆ ಬೋರಿಂಗ್ ಆಗದಂತೆ ಸಿನಿಮಾ ಗಮನ ಸೆಳೆಯುತ್ತದೆ. ಛಾಯಾಗ್ರಹಣ ಸಂಗೀತ ಸೇರಿದಂತೆ ಟೆಕ್ನಿಕಲಿ ಟೀಮ್ ಬಹಳ ಸ್ಟ್ರಾಂಗ್ ಆಗಿ ಕೆಲಸ ಮಾಡಿದೆ.
ತನ್ನ ಕೈ ಮೇಲೆ ಡಿ ಅನ್ನೋ ಟ್ಯಾಟೋ…ಡೆವಿಲ್ ರೀತಿ ಕ್ರೂರವಾಗಿದ್ದ ದೇವರಾಜ್ ಡಾಲಿ (ಧನಂಜಯ). ಆ ನಂತರ ರಕ್ತ ಕೈಗೆ ಮೆತ್ಕೊಳಲ್ಲ ಅಂತ ಡಿಸೈಡ್ ಮಾಡ್ತಾರೆ. ಅದಕ್ಕೊಂದು ಬಲವಾದ ಕಾರಣ ಇರುತ್ತೆ. ಕಿಂಗ್ ನ ಮೀಟ್ ಮಾಡಬೇಕು. ಕಿಂಗ್ ಮೇಕರ್ ಆಗಬೇಕು ಎಂಬ ಉದ್ದೇಶ ಡಾಲಿಗೆ. ತನ್ನ ಸ್ಮಾರ್ಟ್ ಲುಕ್ , ಬಾಡಿ ಲಾಂಗ್ವೇಜ್ , ವಾಕಿಂಗ್ ಸ್ಟೈಲ್ , ಸಂದರ್ಭಕ್ಕೆ ತಕ್ಕ ಖಡಕ್ ಮಾತಿನ ಮೂಲಕವೇ ಇಡೀ ಚಿತ್ರವನ್ನ ಆವರಿಸಿಕೊಂಡು ತಮ್ಮ ನಟನ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಇನ್ನು ನಟ ಸತ್ಯದೇವ್ ಬ್ಯಾಂಕ್ ಎಂಪ್ಲಾಯ್ ಆಗಿ ಬಹಳ ಲೀಲಾ ಜಾಲವಾಗಿ ತನ್ನ ಪಾತ್ರವನ್ನು ನಿರ್ವಹಿಸಿದ್ದಾರೆ.
ಏನೋ ಮಾಡಲು ಹೋಗಿ ಇನ್ನೇನು ಮಾಡಿ ಯಡವಟ್ಟು ಮಾಡಿಕೊಳ್ಳೋ ಸೂರ್ಯ ಮಾತಿನ ಟೈಮಿಂಗ್ , ಹಾಸ್ಯದ ಮೂಲಕ ಗಮನ ಸೆಳೆಯುತ್ತಾರೆ. ನಟಿ ಪ್ರಿಯಾ ಭವಾನಿ ಶಂಕರ್ ಕೂಡ ಸೊಗಸಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ವಿಲನ್ ಪಾತ್ರದಲ್ಲಿ ಮತ್ತೊಬ್ಬ ನಟ ಸುನಿಲ್ , ಶೇರ್ ಮಾರ್ಕೆಟ್ ಬಾಬಾ ಪಾತ್ರಧಾರಿ ಸತ್ಯರಾಜ್ , ಕಿಂಗ್ ಪಾತ್ರದಲ್ಲಿ ಕೆಜಿಎಫ್ ರಾಮಚಂದ್ರ , ಗೆಳೆಯನಾಗಿ ಸತ್ಯ , ಜೆನಿಫರ್ , ಅಮೃತಾ ಅಯ್ಯಂಗಾರ್ , ಸುರೇಶ್ ಚಂದ್ರ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.
ಒಟ್ಟಾರೆ ಕುತೂಹಲ ಮೂಡಿಸುವ ಥ್ರಿಲ್ಲಿಂಗ್ , ಬ್ಯಾಂಕಿಂಗ್ ಕ್ಷೇತ್ರದ ತಳಮಳವನ್ನ ಬಹಳ ಸೂಕ್ಷ್ಮವಾಗಿ ಹೇಳಿರುವ ಈ ಚಿತ್ರವನ್ನು ಎಲ್ಲರೂ ನೋಡುವಂತಿದೆ.